Oh My Son Lyrics – ಓ ಮೈ ಸನ್ ಸಾಹಿತ್ಯ – Oh My Son kannada lyrics – AK 47

0
4007
oh my son ak47 song lyrics thumbnail

Oh My Son Lyrics are penned by Hamsalekha. The song is sung by S P Balasubramanyam. Oh My Son Kannada lyrics are from the movie Ak 47 starring Shivarajkumar, Chandini, Om Puri, And Ashish Vidyarthi. Ak 47 released in 1999 and the movie is directed by Om Prakash Rao. and produced by Ramu. The music for the movie is composed by Hamsalekha. Oh My Son lyrics in Kannada and English is given below.

ಓ ಮೈ ಸನ್ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್ ಪಿ ಬಾಲಸುಬ್ರಮಣ್ಯಂ ರವರು. ಈ ಹಾಡು 1999 ಬಿಡುಗಡೆಯಾದ ಶಿವರಾಜಕುಮಾರ, ಚಾಂದಿನಿ, ಓಂ ಪುರಿ, ಮತ್ತು ಆಶಿಶ್ ವಿದ್ಯಾರ್ಥಿ ಅವರು ನಟಿಸಿದ ಎಕೆ ೪೭ ಚಿತ್ರದ ಹಾಡಾಗಿದೆ. ಓ ಮೈ ಸನ್ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಎಕೆ ೪೭ ಚಿತ್ರ ನಿರ್ದೇಶಿಸಿದವರು ಓಂ ಪ್ರಕಾಶ ರಾವ್ ಮತ್ತು ನಿರ್ಮಾಪಕರು ರಾಮು.

  • ಹಾಡು: ಓ ಮೈ ಸನ್
  • ಚಿತ್ರ: ಎಕೆ ೪೭ (1999)
  • ನಿರ್ದೇಶಕ: ಓಂ ಪ್ರಕಾಶ ರಾವ್
  • ನಿರ್ಮಾಪಕ: ರಾಮು
  • ಸಂಗೀತ: ಹಂಸಲೇಖ

Oh My Son lyrics in Kannada

ಓ ಮೈ ಸನ್

ಅಮ್ಮನ ಆಸೆಯ, ಆರತಿ ಆಗು
ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ, ಒಳ್ಳೆಯ ಪ್ರಜೆಯಾಗು

ಓ ಮೈ ಸನ್

ಅಮ್ಮನ ಆಸೆಯ, ಆರತಿ ಆಗು
ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ, ಒಳ್ಳೆಯ ಪ್ರಜೆಯಾಗು

ಯಾರು ಹೆತ್ತರಯ್ಯ ಇಂತ ಕಂದನನ್ನು
ಅಂತ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಳಶವಾಗು
ವಿದ್ಯೆ ಎಂಬ ಖಡ್ಗ ಒಂದು ತಂದೆ ಕೊಡುಗೆ
ವಿನಯ ಎಂಬ ಅಸ್ತ್ರ ಒಂದು ತಾಯ ಕೊಡುಗೆ
ಧ್ರೋಹಿ ಎಂಬ ಪಟ್ಟದಿಂದ ದೂರವಾಗು

ಕೋಪವೆ ಹಿಂಸೆಗೆ ಕಾರಣ
ಸಹನೆಯೆ ಬಾಳಿಗೆ ಭೂಷಣ
ಆವೇಶವನು ಜಯಿಸು
ಓಂ ಸಹನ ಭವತು ಜಪಿಸು

ಓ ಮೈ ಸನ್

ಅಮ್ಮನ ಆಸೆಯ, ಆರತಿ ಆಗು
ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ, ಒಳ್ಳೆಯ ಪ್ರಜೆಯಾಗು

ನಿನ್ನ ಬಾಳಿಗೊಂದು ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕ ಪಕ್ಕ ನೋಡದಂತೆ ನೀನು ಸಾಗು
ನಿನಗೆ ಮಾತ್ರವಲ್ಲ ನಿನಗಾಗೊ ನೋವು
ಪಾಲುದಾರರಯ್ಯ ನೋವಿನಲ್ಲು ನಾವು
ನೋವು ನೀಡದಂತೆ ಮುದ್ದು ಮಗನಾಗು

ಆತುರ ಪಟ್ಟರೆ ಆಪತ್ತು
ಮಾನವೆ ಸಜ್ಜನ ಸಂಪತ್ತು
ಅಹಂಕಾರವನು ತ್ಯಜಿಸು
ಓಂ ಶಾಂತಿ ಶಾಂತಿ ಜಪಿಸು

ಓ ಮೈ ಸನ್

ಕನ್ನಡ ತಾಯಿಗೆ ಆರತಿ ಆದೆ
ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ

ನನ್ನ ಮನೆ ನನ್ನ ಮಗ ಅಂದೆ ನಾನು
ನಮ್ಮ ನಾಡೆ ನನ್ನ ಮನೆ ಅಂದೆ ನೀನು
ನಿನ್ನ ಮನೆಯಲ್ಲಿ ನೀ ಚಿರಾಯು ಆದೆ
ಹಿಂಸೆಯನ್ನು ಸಹಿಸಬೇಕು ಅಂದೆ ನಾನು
ಸಹಿಸುವುದೆ ಅಪರಾಧ ಎಂದೆ ನೀನು
ಒಪ್ಪಿಕೊಂಡೆ ಕಿರಿಯರಿಗೆ ಗುರುವಾದೆ

ಸಾವಿರ ಎರಡು ಸಾವಿರ
ವರ್ಷದ ಮಹಾ ಮನ್ವಂತರ
ಈ ಧರೆಯು ಕಾಣಲಿದೆ
ಅಲ್ಲಿ ನಿನ್ನ ಮಾತು ಫಲಿಸಲಿದೆ

ಓ ಮೈ ಸನ್

ಕನ್ನದ ತಾಯಿಗೆ ಆರತಿ ಆದೆ
ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ

Oh My Son lyrics in English

Oh My Son

Ammana Aaseya, Aarathi Aagu
Appana Aaseya, Aagasavaagu
Olle Janaralondagu
Nadina, Olleya Prajeyagu

Oh My Son

Ammana Aaseya, Aarathi Aagu
Appana Aaseya, Aagasavaagu
Olle Janaralondagu
Nadina, Olleya Prajeyagu

Yaaru Hetharayya Intha Kandanannu
Antha Loka Mechchabeku Ninnannu
Namma Asha Gopurada Kalashavaagu
Vidye Yemba Khadga Ondu Tande Koduge
Vinaya Yemba Astra Ondu Thaya Koduge
Dhrohi Yemba Pattadinda Dooravagu

Kopave Himsege Karana
Sahaneye Baalige Bhooshana
Aveshavanu Jayisu
Om Sahana Bhavatu Japisu

Oh My Son

Ammana Aaseya, Aarathi Aagu
Appana Aaseya, Aagasavaagu
Olle Janaralondagu
Nadina, Olleya Prajeyagu

Ninna Baligondu Putta Guriyirali
Sarala Rekheyalli Ditta Nadeyirali
Akka Pakka Nodadante Neenu Saagu
Ninage Matravalla Ninagago Novu
Paaludararayya Novinallu Naavu
Novu Nidantha Muddu Maganaagu

Aathura Pattare Apattu
Maanave Sajjana Sampattu
Ahankaravanu Tyajisu
Om Shanti Shanti Japisu

Oh My Son

Kannada Thaayige Aarati Aade
Bhaarata Matheya Keeruti Aade
Naade Mechchuva Maganade
Namma Yedege Halerede

Nanna Mane Nanna Maga Ande Naanu
Namma Naade Namma Mane Ande Neenu
Ninna Maneyalli Ni Chirayu Aade
Himseyannu Sahaisabeku Ande Naanu
Sahisuvude Aparadha Yende Neenu
Oppikonde Kiriyarige Guruvaade

Saavira Yeradu Saavira
Varshada Maha Manvanthara
E Dhareyu Kaanalide
Alli Ninna Maatu Phalisalide

Oh My Son

Kannada Thaayige Aarati Aade
Bharata Matheya Keeruti Aade
Naade Mechchuva Maganade
Namma Yedege Halerede

More AK 47 Songs Lyrics

  1. Kadalo Kadalo Song Lyrics
  2. Naanu Kannadada Kanda lyrics
  3. Oh My Son Lyrics
  4. All Ak 47 songs lyrics

Song Details