Kaiya Chivuti Omme Lyrics are penned by Hemanth Kumar. The song is sung by Shreya Ghoshal. Kaiya Chivuti Omme lyrics are from the movie Fortuner starring Diganth, Sonu Gowda, Swathi Sharma, Naveen Krishna, Rajesh Nataranga. Fortuner released in 2019 and the movie is directed by Manjunath J Anivarya. and produced by Rajesh Golecha. The music for the movie is composed by Poornachandra Tejaswi. Kaiya Chivuti Omme lyrics in Kannada and English is given below.
Kaiya Chivuti Omme is a love song which plays in the movie when Diganth and Sonu Gowda are marrying. The song starts with “Kaiya Chivuti Omme Nodikollalene,
Nanaa Kannu Nane Nambadadenu”. The rough translation of this sentence might be “I cannot believe what is happening, Should I pinch myself and check if it is real”.
ಕೈಯ ಚಿವುಟಿ ಒಮ್ಮೆ ಹಾಡಿನ ಸಾಹಿತ್ಯ ಬರೆದವರು ಹೇಮಂತ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದಿಗಂತ್, ಸೋನು ಗೌಡ, ಸ್ವಾತಿ ಶರ್ಮ, ನವೀನ ಕೃಷ್ಣ, ರಾಜೇಶ್ ನಟರಂಗ ಅವರು ನಟಿಸಿದ ಫಾರ್ಚುನರ್ ಚಿತ್ರದ ಹಾಡಾಗಿದೆ. ಕೈಯ ಚಿವುಟಿ ಒಮ್ಮೆ ಹಾಡಿಗೆ ಸಂಗೀತ ಕೊಟ್ಟವರು ಪೂರ್ಣಚಂದ್ರ ತೇಜಸ್ವಿ ರವರು. ಫಾರ್ಚುನರ್ ಚಿತ್ರ ನಿರ್ದೇಶಿಸಿದವರು ಮಂಜುನಾಥ್ ಜೆ ಅನಿವಾರ್ಯ ಮತ್ತು ನಿರ್ಮಾಪಕರು ರಾಜೇಶ್ ಗೋಲೆಚ.
- ಹಾಡು: ಕೈಯ ಚಿವುಟಿ ಒಮ್ಮೆ
- ಚಿತ್ರ: ಫಾರ್ಚುನರ್ (೨೦೧೯)
- ನಿರ್ದೇಶಕ: ಮಂಜುನಾಥ್ ಜೆ ಅನಿವಾರ್ಯ
- ನಿರ್ಮಾಪಕ: ರಾಜೇಶ್ ಗೋಲೆಚ
- ಸಂಗೀತ: ಪೂರ್ಣಚಂದ್ರ ತೇಜಸ್ವಿ
Kaiya Chivuti Omme lyrics in Kannada
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಬಿಗಿ ಹಿಡಿದ ಬೆರಳ ಸಡಿಲಿಸ ಬೇಡ
ಕಲೆತಿರೋ ಈ ಕಣ್ಣಾ ಕದಲಿಸಬೇಡ
ಅರೆಗಳಿಗೆಯೂ ನನ್ನ ತೊರೆದಿರಬೇಡ
ತೊರೆದಿರುವ ಕ್ಷಣವ ನೆನೆವುದು ಬೇಡ
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ನಿನ್ನ ಅಂಗೈ ಮೇಲೆ ಮುಖವಿರಿಸಿ
ನಿನ್ನೆ ಹೀಗೆ ನೋಡುವಾಸೆ
ಎಲ್ಲ ಜನುಮ ನಿನ್ನೆ ಅನುಸರಿಸಿ
ನಿನ್ನ ಉಸಿರಾ ಸೇರುವಾಸೆ
ಗಂಟಲು ಬಿಗಿದಿದೆ ಮಾತು ಬಾರದೆ
ಕಂಗಳು ತುಂಬಿವೆ ಸಂತೋಷಕೆ
ಕೊರಳ ಮೇಲಿದೆ ನಿನ್ನಯ ಉಡುಗೊರೆ
ಇದಕೂ ಮೀರಿದ ಬದುಕೇತಕೆ
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು
ನನ್ನ ಕಣ್ಣ ನಾನೇ ನಂಬದಾದೇನು
ಗೊತ್ತೇ ಇರದ ಅವನ ಜಗದೊಳಗೆ
ಮೊದಲ ಹೆಜ್ಜೆ ಇಡುವಂತಿದೆ
ಅವನ ಹೆಸರ ಕೂಗಿ ಕರೆದಾಗ
ನನ್ನೇ ಯಾರೋ ಕರೆದಂತಿದೆ
ನಾಚಿಕೆ ಕಣ್ಣಲಿ ಹೇಗೆ ನೋಡಲಿ
ಬೆರಳು ಬಿಡಿಸಿದೆ ರಂಗೋಲಿಯ
ಒಲವ ದಿಬ್ಬಣ ಏರಿ ಹೊರಟೆನಾ
ತೀರ ಹೊಸದೀ ರೋಮಾಂಚನ
ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
ಆಸೆಗಳ ಚುಕ್ಕಿ ಇಟ್ಟೇನು ಕನಸಲಿ
ಮೂಡಿಸು ಚಿತ್ರವ ನನ್ನಯ ಬದುಕಲಿ
ಕೈಯ ಹಿಡಿದು ಬರುವೆ ನಿನ್ನ ದಾರಿಯಲ್ಲಿ
ಇಂದು ನನ್ನ ಕನಸು ನಿನ್ನ ಕಣ್ಣಲಿ
Kaiya Chivuti Omme lyrics in English
Kaiya Chivuti Omme Nodikollalene
Nanaa Kannu Nane Nambadadenu
Kaiya Chuvuti Ommee Nodalenu
Nanaa Kannu Nane Nambadenu
Bigihididu Berala Sadalisa Beda
Kaletiro Ii Kanna Kadalisabeda
Aragaligeyu Nanna Toradirabeda
Torediruva Kshanava Neneyadu Beda
Kaiya Chivuti Omme Nodikollalene
Nanaa Kannu Nane Nambadadenu
Ninna Aangai Mele Mukhavirisi
Nenne Hegee Noduvaase
Yella Januma Ninne Anusarisi
Ninna Uusira Seruva Aasee
Gantalu Bigidide Matu Barade
Kangalu Tumbive Santoshake
Korala Melide Ninneya Udugore
Iduku Mirida Baduketake
Kaiya Chivuti Omme Nodikollalene
Nanaa Kannu Nane Nambadadenu
Gotte Irada Aavana Jagadolage
Modala Hejje Iduvanttide
Avana Hesara Kuuge Karedaga
Nanna Yaro Karedantide
Nachike Kannali Hege Nodali
Beralu Biduside Rangoliya
Oalava Dibbana Yeri Horatena
Tera Hosade Romanchana
Kaiya Hididu Baruve Ninna Dariyalli
Indu Nanna Kanasu Ninna Kanalli
Kaiya Hididu Baruve Ninna Dariyalli
Indu Nanna Kanasu Ninna Kanalli
Aaasegala Chukki Eeteenu Kanasalli
Mudisu Chitrava Nanna Badukalli
Kaiya Hididu Baruve Ninna Dariyalli
Indu Nanna Kanasu Ninna Kanalli
Similar Songs Lyrics
More From Fortuner Songs Lyrics
Listen to the whole Album on
Song Details
- Movie: Fortuner
- Starring: Diganth, Sonu Gowda, Swathi Sharma, Naveen Krishna, Rajesh Nataranga
- Song Name: Kaiya Chivuti Omme
- Singer: Shreya Ghoshal
- Lyricist: Hemanth Kumar
- Music: Poornachandra Tejaswi
- Year: 2019
- Producer: Rajesh Golecha
- Director: Manjunath J Anivarya