Yethake Bogase Thumba song lyrics | Bell Bottom | ಏತಕೆ ಬೊಗಸೆ ತುಂಬ

Yethake song lyrics thumbnail

Yethake Song Lyrics are penned by Yogaraj Bhat. The song is sung by Vijay Prakash. Yethake Song lyrics are from the movie Bell Bottom starring Rishabh Shetty, Haripriya, Yogaraj Bhat, Pramod Shetty, Achuth Kumar, Sujay Shastry, Shivmani, Dinesh Mangalore, P D Sathish, Prakash Thuminad. Bell Bottom released in 2019 and the movie is directed by Jayatheertha. and produced by Santhosh Kumar K C. The music for the movie is composed by Ajaneesh B Loknath. Yethake Song lyrics in Kannada and English is given below.

ಏತಕೆ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ರಿಷಬ್ ಶೆಟ್ಟಿ, ಹರಿಪ್ರಿಯಾ, ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರೀ, ಶಿವಮಣಿ, ದಿನೇಶ್ ಮಂಗಳೂರು, ಪಿಡಿ ಸಂತೀಶ್, ಪ್ರಕಾಶ್ ತೂಮಿನಾಡ್ ಅವರು ನಟಿಸಿದ ಬೆಲ್ ಬಾಟಮ್ ಚಿತ್ರದ ಹಾಡಾಗಿದೆ. ಏತಕೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಬಿ ಲೋಕ್ನಾಥ್ ರವರು. ಬೆಲ್ ಬಾಟಮ್ ಚಿತ್ರ ನಿರ್ದೇಶಿಸಿದವರು ಜಯತೀರ್ಥ ಮತ್ತು ನಿರ್ಮಾಪಕರು ಸಂತೋಷ್ ಕುಮಾರ್ ಕೆಸಿ.

  • ಹಾಡು: ಏತಕೆ
  • ಚಿತ್ರ: ಬೆಲ್ ಬಾಟಮ್ (೨೦೧೯)
  • ನಿರ್ದೇಶಕ: ಜಯತೀರ್ಥ
  • ನಿರ್ಮಾಪಕ: ಸಂತೋಷ್ ಕುಮಾರ್ ಕೆಸಿ
  • ಸಂಗೀತ: ಅಜನೀಶ್ ಬಿ ಲೋಕ್ನಾಥ್

 

Yethake Song lyrics in Kannada

ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲಾ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ, ಬೊಗಸೆ ತುಂಬ ಆಸೆ ನೀಡುವೆ?

ಈ ನಲ್ಮೆಯ ಬಾಯಿ ಬಿಡಲು
ನನಗೊಂದು ಪದ ಬೇಕಿದೆ
ಎನ್ನೆನ್ನಲೀ ಒಳಗಿಂದೊಳಗೆ
ಅನುರಾಗ ಮಿತಿ ಮೀರಿದೆ

ಕಣ್ಣು ಕಣ್ಣುಕಲೆತಾಗ ಯಾಮಾರಿಸಿ
ಕಳ್ಳ ಕನಸು ಬಚ್ಚಿಡುವೆ
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ

ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?

ನಿನ್ನೋಪ್ಪಿಗೆ ಇದೆಯಾ ಹೇಳು
ಕಡುಪೋಲಿ ನಾನಾಗಲು?
ನಿನ್ನಾಣೆಗೂ ಕಾಯುತ್ತಿರುವೆ
ನಾ ಬೇಗ ಹಾಳಾಗಲೂ

ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ
ನೀಡು ನಿನ್ನ ಸಹಕಾರ
ಖಾಲಿ ತೋಳು ನನಗಂತು ಸಾಕಾಗಿದೆ
ಏನು ಹೇಳು ಪರಿಹಾರ?

ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲಾ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ, ಬೊಗಸೆ ತುಂಬ ಆಸೆ ನೀಡುವೆ?

Yethake Song lyrics in English

Yethake bogase thumba aase needuve
Yethake kanasinalli meese theeduve
Kelu nanadu thusu nodu benda hareya
Adake ishtella haaraaduve
Thusuve kai chaachu sari hoguve
Yethake bogase thumba aase needuve

Ee nalmeya baayi bidalu
Nanagondu pada bekide
Enennali olagindolage
Anuraaga mithi meeride

Kannu kannu kaletaaga yaamaarisi
Kalla kanasu bacchiduve
Ninna seraga thudiyannu maataadisi
Nanna manasu bicchiduve

Yethake bogase thumba aase needuve
Yethake kanasinalli meese theeduve

Ninnoppige ideya helu

Kadupoli naanaagalu
Ninnaanegu kaayutthiruve
Naa bega haalaagalu

Kenne mele gurutondu bekaagide
Needu ninna sahakaara
Khaali tholu nanagantu saakaagide
Enu helu parihaara

Yetake bogase thumba aase needuve
Yethake kanasinalli meese theeduve
Kelu nanadu thusu nodu benda hareya
Adake ishtella haaraaduve
Thusuve kai chaachu sari hoguve
Yethake bogase thumba aase needuve

More From Bell Bottom Songs Lyrics

  1. Yethake song lyrics
  2. Aadhi Jyothi Banyo Song lyrics

Listen to the Album on

Song Details