
Baaluvantha Hoove Lyrics are penned by Hamsalekha. The song is sung by Rajkumar. Baaluvantha Hoove lyrics are from the movie Aakasmika starring Rajkumar, Madhavi, And Geetha. Aakasmika released on 20 July 1993 and the movie is directed by T. S. Nagabharana. and produced by S. A. Govindaraju. The music for the movie is composed by Hamsalekha. Baaluvantha Hoove lyrics in Kannada and English is given below.
ಬಾಳುವಂತ ಹೂವೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಾಜಕುಮಾರ್ ರವರು. ಈ ಹಾಡು 20 July 1993 ಬಿಡುಗಡೆಯಾದ ರಾಜಕುಮಾರ್, ಮಾಧವಿ, ಮತ್ತು ಗೀತಾ ಅವರು ನಟಿಸಿದ ಆಕಸ್ಮಿಕ ಚಿತ್ರದ ಹಾಡಾಗಿದೆ. ಬಾಳುವಂತ ಹೂವೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಆಕಸ್ಮಿಕ ಚಿತ್ರ ನಿರ್ದೇಶಿಸಿದವರು ಟಿ. ಎಸ್. ನಾಗಾಭರಣ ಮತ್ತು ನಿರ್ಮಾಪಕರು ಎಸ್. ಎ. ಗೋವಿಂದರಾಜು.
- ಹಾಡು: ಬಾಳುವಂತ ಹೂವೆ
- ಚಿತ್ರ: ಆಕಸ್ಮಿಕ (20 July 1993)
- ನಿರ್ದೇಶಕ: ಟಿ. ಎಸ್. ನಾಗಾಭರಣ
- ನಿರ್ಮಾಪಕ: ಎಸ್. ಎ. ಗೋವಿಂದರಾಜು
- ಸಂಗೀತ: ಹಂಸಲೇಖ
Baaluvantha Hoove lyrics in Kannada
ಬಾಳುವಂತ ಹೂವೆ ಬಾಡುವ ಆಸೆ ಏಕೆ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕವಲುದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ
ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯೂ ಕೂಡ ಬೇವು
ಬಾಳು ಒಂದು ಸಂತೆ, ಸಂತೆ ತುಂಬಾ ಚಿಂತೆ
ಮದ್ಯ ಮನಗಳಿಂದ ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು ಡಂಡಿಸುವುದು ನ್ಯಾಯ
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು
ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಬಾಳ ಕದನದಲ್ಲಿ, ಭರವಸೆಗಳು ಬೇಕು
ನಾಳೆ ನನ್ನದೆನ್ನುವ, ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು, ಇದ್ದು ಜಯಿಸಬೇಕು
ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ
ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ
ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
Baaluvantha Hoove lyrics in English
Baaluvantha Hoove Baaduva Aase Yeke
Baaluvantha Hoove Baaduva Aase Yeke
Haaduvantha Kogile Aluva Aase Yeke
Kavalu Daariyalli Baalu Saadhyave
Avali Dhoni Mele Yaana Yogyave
Baaluvantha Hoove Baaduva Aase Yeke
Haaduvantha Kogile Aluva Aase Yeke
Yaarigilla Novu, Yaarigilla Saavu
Vyartha Vyasanadinda Sihiyu Kooda Bevu
Baalu Ondu Sante, Sante Thumba Chinte
Madya Managalinda Chinte Belevudante
Anke Irada Manasanu Dandisuvudu Nyaaya
Mooka Mugdha Dhehava Himsisuvudu Heyaa
Sanna Biruku Saalade Thumbu Doni Tala Seralu
Sanna Aluku Saalade Thumbu Baduku Baradaagalu
Baaluvantha Hoove Baaduva Aase Yeke
Haaduvantha Kogile Aluva Aase Yeke
Baala Kadanadalli, Baravasegalu Beku
Naale Nannadennuva Nambikegalu Beku
Jeevaraashiyalli Maanavarige Aadyate
Naave Moodaradare Jnanakelli Poojyate
Illi Eesabeku, Iddu Jayisabeku
Nagarikaraada Mele Sugunaraagabeku
Ninna Haladhi Kannali Janaraneke Nee Noduve
Manada Donku Kaanade Jagavaneke Nee Dooruve
Baaluvantha Hoove Baaduva Aase Yeke
Baaluvantha Hoove Baaduva Aase Yeke
Kavalu Daariyalli Baalu Saadhyave
Avali Dhoni Mele Yaana Yogyave
Baaluvantha Hoove Baaduva Aase Yeke
Haaduvantha Kogile Aluva Aase Yeke
More Aakasmika Songs Lyrics
- Huttidare Kannada Nadalli Lyrics
- Ee Kannigu Hennigu Lyrics
- Baaluvantha Hoove Lyrics
- Agumbeya Prema Sanjeya Lyrics
- Aakasmika Songs Lyrics
Song Details
- Movie: Aakasmika
- Starring: Dr Rajkumar, Madhavi, And Geetha
- Song Name: Baaluvantha Hoove
- Singer: Dr. Rajkumar
- Lyricist: Hamsalekha
- Music: Hamsalekha
- Watch the video: here
- Producer: S. A. Govindaraju
- Director: T. S. Nagabharana