Kanneeraa Varesoke Lyrics in Kannada and English | Kavacha | ಕಣ್ಣೀರಾ

Kanneeraa Varesoke Lyrics thumbnail

Kanneeraa Varesoke Lyrics are penned by K Kalyan. The song is sung by Vyasraj. Kanneeraa Varesoke lyrics are from the movie Kavacha starring Shivarajkumar, Isha Koppikar, Kruthika Jayakumar, Vasishta Simha, Baby Meenakshi, Ravi Kale, Rajesh Nataranga. Kavacha released in 2019 and the movie is directed by Gvr Vasu. and produced by Mvv Sathyanarayana. The music for the movie is composed by Arjun Janya. Kanneeraa Varesoke lyrics in Kannada and English is given below.

ಕಣ್ಣೀರಾ ವರೆಸೋಕೆ ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ವ್ಯಾಸ್ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶಿವರಾಜ್ಕುಮಾರ್, ಇಶಾ ಕೊಪ್ಪಿಕರ್, ಕೃತಿಕಾ ಜಯಕುಮಾರ್, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ರವಿ ಕಲೆ, ರಾಜೇಶ್ ನಟರಂಗ ಅವರು ನಟಿಸಿದ ಕವಚ ಚಿತ್ರದ ಹಾಡಾಗಿದೆ. ಕಣ್ಣೀರಾ ವರೆಸೋಕೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕವಚ ಚಿತ್ರ ನಿರ್ದೇಶಿಸಿದವರು ಜಿವಿಆರ್ ವಾಸು ಮತ್ತು ನಿರ್ಮಾಪಕರು ಎಂ ವಿ ವಿ ಸತ್ಯನಾರಾಯಣ.

  • ಹಾಡು: ಕಣ್ಣೀರಾ ವರೆಸೋಕೆ
  • ಚಿತ್ರ: ಕವಚ (೨೦೧೯)
  • ನಿರ್ದೇಶಕ: ಜಿವಿಆರ್ ವಾಸು
  • ನಿರ್ಮಾಪಕ: ಎಂ ವಿ ವಿ ಸತ್ಯನಾರಾಯಣ
  • ಸಂಗೀತ: ಅರ್ಜುನ್ ಜನ್ಯ

Kanneeraa Varesoke lyrics in Kannada

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು
ಬಾಳಲ್ಲಿ ಗೆಲ್ಲೋಕೆ ಭಯವು ಏಕೆ ಬೇಕು
ಹೃದಯ ಮೀಟೊ ಒಂದು ನಗುವೇ ಸಾಕು

ಎದೆಗುಂದದೇನೆ ಜಗವನ್ನು ಗೆಲ್ಲು
ಮನಸಂಜದಂತೆ ಬಲವಾಗಿ ನಿಲ್ಲು ಆಆ…

ಕರುಣೆಯಲ್ಲಿ ಕಣಜವಾಗು
ಕದನದಲ್ಲಿ ಕವಚವಾಗು

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು

ಅರ್ಜುನನ ಧ್ವಜದಲ್ಲಿರೋ ಹನುಮಂತನ ಹಾಗೆ
ಗಗನವ ಸೀಳಿ ಹಾರುವ ಶಕ್ತಿ ನಿನ್ನೊಳಗಿದೆ ತಮ್ಮ
ನಿನ್ನ ಬದುಕಿಗೆ ನೀ ಬ್ರಹ್ಮ

ಯೋಚಿಸಿದ ಹಾಗೆ ಬದುಕುಂಟು ಮುಂದೆ
ಪ್ರಾರ್ಥನೆಯ ಹಾಗೆ ಫಲವುಂಟು ಇಂದೇ

ಕತ್ತಲೆದುರು ಸೂರ್ಯನಾಗು
ಕಷ್ಟದೆದುರು ಶೌರ್ಯನಾಗು

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು

ಅವಮಾನ ಅಪಮಾನ ಬಂದರೆ ಬರಲೇಳು
ಅವುಗಳೇ ನಿನ್ನ ಸಾಧನೆಗಳಿಗೆ
ಮೆಟ್ಟಿಲುಗಳ ಸಾಲು
ಬರದು ಎಂದು ನಿನಗೆ ಸೋಲು

ಬಿದ್ದವನು ತಾನೇ ಎದ್ದೇಳುತಾನೆ
ದಾರಿ ಸಿಗದೋನೆ ದೊರೆಯಾಗುತಾನೆ

ಹೆದರಬೇಡಾ ಪರರಿಗಾಗಿ
ಬಾಳಿ ಬದುಕು ಜನರಿಗಾಗಿ

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು

Kanneeraa Varesoke lyrics in English

Kanneeraa Orasoke Bere Yaaru Beku
Manasu Maadu Ninna Kayye Saaku
Baalalli Gelloke Bhayavu Yaake Beku
Hrudayaa Meeto Ondu Naguve Saaku

Yedegundadene Jagavannu Gellu
Manasanjadante Balavaagi Nillu Aaaa…

Karuneyalli Kanajavaagu
Kadanadalli Kavachavaagu

Kanneeraa Orasoke Bere Yaaru Beku
Manasu Maadu Ninna Kayye Saaku

Arjunanaa Dhvajadalliro Hanumanthana Haage
Gaganava Seeli Haaruva Shakthi Ninnolagide Thamma
Ninna Badukige Nee Brahmaa

Yochisida Haage Badukuntu Munde
Prarthaneya Haage Phalavuntu Inde

Kathaleduru Suryanaagu
Kashta Deduru Shauryanaagu

Kanneeraa Orasoke Bere Yaaru Beku
Manasu Maadu Ninna Kayye Saaku

Avamana Apamana Banadara Baralelu
Avugale Ninna Sadhanagalige
Mettilugala Salu
Baradu Endu Ninage Solu

Biddavanu Thaane Eddeluthaane
Daari Sigadone Doreyaaguthaane

Hedarabedaa Pararigaagi
Baaalibaduku Janarigaagi

Kanneeraa Orasoke Bere Yaaru Beku
Manasu Maadu Ninna Kayye Saaku

More From Kavacha Movie Songs Lyrics

  1. Rekkeya Kudure Yeri Lyrics
  2. Yaaro Nee Lyrics
  3. Rekkeya Kudure Yeri Solo Song Lyrics

Song Details