Taja Samachara Song Lyrics in Kannada and English | Natasaarvabhouma

0
10089

Taja Samachara Song Lyrics are penned by Jayanth Kaikini. The song is sung by Jithin Raj. Taja Samachara Song lyrics are from the movie Natasaarvabhowma starring Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma released in 2019 and the movie is directed by Pavan Wadeyar. and produced by Rockline Venkatesh. The music for the movie is composed by D Imman. Taja Samachara Song lyrics in Kannada and English is given below.

ತಾಜಾ ಸಮಾಚಾರ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಜಿತಿನ್ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ಅವರು ನಟಿಸಿದ ನಟಸಾರ್ವಭೌಮ ಚಿತ್ರದ ಹಾಡಾಗಿದೆ. ತಾಜಾ ಸಮಾಚಾರ ಹಾಡಿಗೆ ಸಂಗೀತ ಕೊಟ್ಟವರು ಡಿ. ಇಮಾನ್ ರವರು. ನಟಸಾರ್ವಭೌಮ ಚಿತ್ರ ನಿರ್ದೇಶಿಸಿದವರು ಪವನ್ ವಡೆಯರ್ ಮತ್ತು ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್.

Natasaarvabhouma songs lyrics poster

  • ಹಾಡು: ತಾಜಾ ಸಮಾಚಾರ
  • ಚಿತ್ರ: ನಟಸಾರ್ವಭೌಮ (೨೦೧೯)
  • ನಿರ್ದೇಶಕ: ಪವನ್ ವಡೆಯರ್
  • ನಿರ್ಮಾಪಕ: ರೋಕ್ಕ್ಲಿಂಗ್ ವೆಂಕಟೇಶ್
  • ಸಂಗೀತ: ಡಿ. ಇಮಾನ್

 

Taja Samachara Song lyrics in Kannada

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ?
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಹೃದಯದ ಗತಿ ನಾಜೂಕು
ಕೊಡುವೆನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು
ಬರುವುದೆ ನನ್ನಯ ಸರದಿ

ಎದೆಗೊರಗಿ ಆಲಿಸಿ ಚಲುವೆ
ಮಾಡಿಬಿಡು ತಪಾಸಣೆ ಶುರೂ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ?
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಜತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ
ಸಖಿ ನಾನಾಗುವೆ ನಿಪುಣ
ಕನಸೆಂಬ ಖಜಾನೆ ಇಗೋ ತುಂಬಿದೆ
ತುಸು ದೂರಾದರೂ ಕಠಿಣ

ಘಮಘಮಿಸಿ ಕವಿದ ಹೆರಳಲ್ಲೀಗ
ಕಳೆದೋಗೋದೇ ಪರಮಾನಂದ
ಅರೆಬಿರಿದು ನಗುವ ಸಿಹಿ ಹೂವಂತೆ
ಪಿಸುಮಾತಾಡು ತುಸು ಜೋರಿಂದ
ಮನ ಈಗಾಗಲೆ ತೆರೆದೋದುತ್ತಿದೆ
ಬರೆಯದಿರುವ ಕಾಗದ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ?
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ
ನಿನ್ನ ಮುದ್ದಾಗಿರೋ ನಿಲುವು
ಬರಿದಾದಂಥ ಬಾಳಲ್ಲಿ ಬಂದಂತಿದೆ
ಬಲು ರೋಮಾಂಚಕ ತಿರುವು

ಗರಿಗೆದರಿ ಸನಿಹ ಕುಣಿದಾಡುತ್ತ
ಮನ ತಂತಾನೇ ನವಿಲಾದಂತೆ
ಅವಿತಿರುವ ಒಲವು ಬಯಲಾಗುತ್ತ
ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ, ಹಠ ಹೆಚ್ಚಾಗಿದೆ
ಎದುರೆ ಇರಲು ದೇವತೆ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ?
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಹೃದಯದ ಗತಿ ನಾಜೂಕು
ಕೊಡುವೆನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು
ಬರುವುದೆ ನನ್ನಯ ಸರದಿ

ಎದೆಗೊರಗಿ ಆಲಿಸಿ ಚಲುವೆ
ಮಾಡಿಬಿಡು ತಪಾಸಣೆ ಶುರೂ

Taja Samachara Song lyrics in English

Taaja Samaachaara Helali Naanu Yaarige?
Anaayaasavaagi Sikkenu Ninna Daalige

Hridayadagadee Naajooku
Koduvenu Kiviyali Varadi
Gunapadisalu Nee Beku
Baruvude Nannaya Saradi

Edegoragi Aalisi Cheluve
Maadibidu Tapaasane Shuru

Taaja Samaachaara Helali Naanu Yaarige?
Anaayaasavaagi Sikkenu Ninna Daalige

Jote Nillutta Koorutta Ninnondige
Sakhi Naanaguve Nipuna
Kanasemba Khajaane Igo Thumbide
Tusu Dooraadaru Kathina

Ghama Ghamisi Kavida Heralalleega
Kaledogode Paramaananda
Are Biridu Naguva Sihi Hoovante
Pisu Maataadu Tusu Jorinda
Mana Eegaagale Teredoduttide
Bareyadiruva Kaagada

Taaja Samaachaara Helali Naanu Yarige?
Anaayaasavaagi Sikkenu Ninna Daalige

Nanna Kannalli Kannittu Nee Nodiko
Ninna Muddagiro Niluvu
Baridaadanta Baalalli Bandantide
Balu Romaanchaka Thiruvu

Garigedari Saniha Kunidaadutta
Mana Tantaane Navilaadante
Avitiruva Olavu Bayalaagutta
Kshana Innashtu Naviraadante
Puta Acchaagide Pata Hecchaagide
Edure Iralu Devate

Taaja Samaachaara Helali Naanu Yarige?
Anaayaasavaagi Sikkenu Ninna Daalige

Hridayadagadee Naajooku
Koduvenu Kiviyali Varadi
Gunapadisalu Nee Beku
Baruvude Nannaya Saradi

Edegoragi Aalisi Cheluve
Maadibidu Tapaasane Shuru

More From Natasaarvabhowma Movie Songs Lyrics

  1. Natasaarvabhowma Title Song Lyrics
  2. Open The Bottle Song Lyrics
  3. Yaaro Naanu Song Lyrics

Listen to the Album on

Song Details