Devarigondu Kagada Baredu Song Lyrics in Kannada – ದೇವರಿಗೊಂದು ಕಾಗದ

Devarigondu Kagada Baredu Song Lyrics In Kannada are penned by Chandrika Gururaj. The song is sung by Rajesh Krishnan. Devarigondu Kagada Baredu Song Lyrics In Kannada are from the movie Bevu Bella starring Jaggesh, Ragini, Lokesh, Ajay Kumar, S. Narayan, Shobharaj & Others. Bevu Bella released in 1993 and the movie is directed by S. Narayan. and produced by J. Girija. The music for the movie is composed by Hamsalekha. Devarigondu Kagada Baredu Lyrics in Kannada and English is given below.

ದೇವರಿಗೊಂದು ಕಾಗದ ಬರೆದು ಹಾಡಿನ ಸಾಹಿತ್ಯ ಬರೆದವರು ಚಂದ್ರಿಕಾ ಗುರುರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನ್ ರವರು. ಈ ಹಾಡು ೧೯೯೩ ಬಿಡುಗಡೆಯಾದ ಜಗ್ಗೇಶ್, ರಾಗಿನಿ, ಲೋಕೇಶ್, ಅಜಯ್ ಕುಮಾರ್, ಎಸ್. ನಾರಾಯಣ್, & ಶೋಭಾರಾಜ್ ಅವರು ನಟಿಸಿದ ಬೇವು ಬೆಲ್ಲ  ಚಿತ್ರದ ಹಾಡಾಗಿದೆ. ದೇವರಿಗೊಂದು ಕಾಗದ ಬರೆದು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೇವು ಬೆಲ್ಲ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಜೆ. ಗಿರಿಜಾ.

  • ಹಾಡು: ದೇವರಿಗೊಂದು ಕಾಗದ ಬರೆದು
  • ಚಿತ್ರ: ಬೇವು ಬೆಲ್ಲ (೧೯೯೩)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ಜೆ. ಗಿರಿಜಾ
  • ಸಂಗೀತ: ಹಂಸಲೇಖ

Devarigondu Kagada Baredu Song Lyrics In Kannada

ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು

ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು

ದೇವರೇ ನೀನು ಇರುವ ವಿಷಯ
ಭೂಮಿಗೆ ನೀನು ಬರದ ಕಥೆಯ
ಅಮ್ಮನು ನನಗೆ ಹೇಳಿದಳು…
ಆದರೆ ಅರ್ಧ ಉಳಿಸಿದಳು…

ಎಲ್ಲಿದೆಯೋ.. ನಿಮ್ಮೂರು..
ದಾರಿಯ ಹೇಳೋರ್ ಯಾರು
ಎಲ್ಲಿದೆಯೋ.. ನಿನ್ನ ಮನೆ..
ಪತ್ತೆಯ ಮಾಡೋರ್ ಯಾರು

ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು

ಅಮ್ಮನಿಗೊಂದು ಸೊಸೆಯ ತಂದು
ಪಾದವ ತೊಳೆದು ಪೂಜಿಸಲೆಂದು
ಒಬ್ಬಳ ನಾನು ಪ್ರೀತಿಸಿದೆ
ಸತ್ಯದ ಕಹಿಯ ಯೋಚಿಸದೆ

ಪ್ರೀತಿಸಿದ.. ಆ ಮಾಯೆ..
ಹೇಳಿಯೇ ಹೋದಳು ಅಂದು
ಪೂಜಿಸುವ ಈ ತಾಯಿ..
ಹೇಳದೆ ಹೋದಳು ಇಂದು

ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು

Devarigondu Kagada Baredu Song Lyrics In Kannada lyrics in English

Devarigondu Kaagada Baredu
Bhoomige Kareebeku
Devarigondu Kaagada Baredu
Bhoomige Kareebeku

Devaru Odho Bhasheya Kaliso
Thayiya Padibeku
Devarigondu Kaagada Baredu
Bhoomige Kareebeku

Devare Neenu Iruva Vishaya
Bhoomige Neenu Barada Katheya
Ammanu Nanage Helidalu..
Aadare Ardha Ulisidalu..

Ellideyo.. Nimmoru..
Daariya Helor Yaaru
Ellideyo.. Ninna Mane..
Patteya Mador Yaru

Devarigondu Kaagada Baredu
Bhoomige Kareebeku
Devaru Odo Bhasheya Kaliso
Thayiya Padeebeku
Devarigondu Kaagada Baredu
Bhoomige Kareebeku..

Ammanigondu Soseyanu Thandu
Paadava Tholedu Poojisalendu
Obbala Naanu Preethiside
Sathyada Kahiya Yochisade

Preethisida.. Aa Maaye..
Heliye Hodalu Andu
Poojisuva Ee Thayi..
Helade Hodalu Indu

Devarigondu Kaagada Baredu
Bhoomige Kareebeku
Devaru Odo Bhaasheya Kaliso
Thaayiya Padeebeku
Devarigondu Kaagada Baredu
Bhoomige Kareebeku

Bevu Bella Songs Lyrics

  1. Januma Needuthale Namma Thayi song lyrics
  2. Kaala Kettoithalla Lyrics

Song Details