Kannada Nadina Jeevanadi song lyrics are written by R.N. Jayagopal and sung by S.P. Balasubhramanyam. This song is from the Kannada movie Jeevanadi starring Vishnuvardha, Anant Nag, Kushboo, Urvashi, Tara, Umashree & others. Jeevanadi movie released in 1996 and was directed by D. Rajendra Babu. Kannada Nadina Jeevanadi song lyrics in Kannada & English is given below.
ಕನ್ನಡ ನಾಡಿನ ಜೀವನಾಡಿ ಹಾಡಿನ ಸಾಹಿತ್ಯ ಬರೆದವರು ಅರ್.ಏನ್. ಜಯಗೋಪಾಲ್ ಹಾಗು ಈ ಹಾಡನ್ನು ಹಾಡಿದವರು ಎಸ.ಪಿ. ಬಾಲಸುಭ್ರಮಣ್ಯಮ್. ಈ ಹಾಡು ೧೯೯೬ರಲ್ಲಿ ಬಿಡುಗಡೆಯಾದ ಜೀವನಾಡಿ ಚಿತ್ರದ ಹಾಡಾಗಿದೆ.
- ಹಾಡು: ಕನ್ನಡ ನಾಡಿನ ಜೀವನದಿ ಕಾವೇರಿ
- ಚಿತ್ರ: ಜೀವನದಿ
- ಸಂಗೀತ: ಕೋಟಿ
- ನಿರ್ದೇಶನ: ಡಿ. ರಾಜೇಂದ್ರ ಬಾಬು
- ನಿರ್ಮಾಪಕ: ಪಿ. ಧನರಾಜ್
Kannada Nadina Jeevanadi Song Lyrics in Kannada
ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನೆ ಪುಣ್ಯ ನದಿ
ಬಳಕುತ ಕುಲುಕುತ ಹರುಷವ ಚೆಲ್ಲುತ ಸಾಗುವ ಧನ್ಯ ನದಿ
ತಾ ಹೆಜ್ಜೆಯ ಇಟ್ಟೆಡೇ ಅಮೃತ ಹರಿಸಿ ಕಾಯುವ ಭಾಗ್ಯ ನದಿ
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಹೋ ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ
ಮಮತೆಯ ಮಾತೆಗೆ ಭಾಗ್ಯದ ದಾತೆಗೆ
ಮಾಡುವೆ ಭಕ್ತಿಯ ವಂದನೆ
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿಂದ
ತರುತಲಿ ಎಲ್ಲೆಲ್ಲೂ ಆನಂದ
ಹಸಿರಿನ ಬೆಳೆ ತಂದು ಕುಡಿಯುವ ಜಲ ತಂದು
ಚೆಲ್ಲುವೆ ನಗೆಯೆನೆಂಬ ಶ್ರೀಗಂಧ
ಧುಮುಕುತ ವೇಗದ ಜಲಪಾತದಲಿ ವಿದ್ಯುತ್ ನೀಡುವೆ
ಬಯಲಲಿ ಕಾಡಲಿ ಕಲ ಕಲ ಹರಿಯುತ ನಾಟ್ಯವ ಮಾಡುವೆ
ಮಂದಗಾಮಿನಿ ಶಾಂತಿವಾಹಿನಿ
ಚಿರ ನೂತನ ಚೇತನ ದಾತೆಯು ನೀನೆ ದಕ್ಷಿಣ ಮಂದಾಕಿನಿ
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಹುಟ್ಟುವ ಕಡೆಯೊಂದು ಫಲ ಕೊಡೊ ಕಡೆಯೊಂದು
ಸಾಗರದಲಿ ನದಿಗೆಂದು ಸಂಗಮವು
ತವರಿನ ಮನೆಯೊಂದು ಗಂಡನ ಮನೆಯೊಂದು
ಹೆಣ್ಣಿಗೆ ಇದೆ ಎಂದು ಜೀವನವು
ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲಾ ದೂರವು
ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೇ ಸಂತೋಷವು
ಮನೆಯ ದೀಪವು ಬಾಳ ಸಂಗೀತವು
ಮನ ಮೆಚ್ಚಿದ ಮಡದಿಯು ಸಿಕ್ಕಿದ ವೇಳೆ ಸ್ವರ್ಗ ಸಂಸಾರವು
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಹೋ ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ
ಮಮತೆಯ ಮಾತೆಗೆ ಭಾಗ್ಯದ ದಾತೆಗೆ
ಮಾಡುವೆ ಭಕ್ತಿಯ ವಂದನೆ
Kannada Nadina Jeevanadi Song Lyrics in English
Gangeya Tungeya Preetiya Sodari Paavane Punya Nadi
Balakutha Kulukutha Harushava Chellutha Saaguva Dhanya Nadi
Tha Hejjeya Ittede Amrutha Harisi Kaayuva Bhaagya Nadi
Kannada Naadina Jeevanad-i Ee Kaaveri
Ooo Jeevanadi Ee Kaaveri
Annava Needuva Devanadi Ee Vayyaari
Ooo Devanadi Ee Vayyaari
Ee Thayiyu Nakkare Santhoshada Sakkare
Mamatheya Maathege Bhagyada Dathege
Maaduve Bakthiya Vandane
Kannada Naadina Jeevanadi Ee Kaaveri
Ooo Jeevanadi Ee Kaaveri
Kodagali Nee Hutti Hariyuve Nalivinda
Tarutali Ellellu Ananda
Hasirina Bele Tandu Kudiyuva Jala Tandu
Chelluve Nageyemba Shrigandha
Dhumukutha Vegada Jalapathadali Vidyuth Needuve
Bayalali Kaadali Kala Kala Hariyuta Naatyava Maaduve
Mandagaamini Shantivaahini
Chira Nutana Chetana Daatheyu Neene Dakshina Mandakini
Kannada Naadina Jeevanadi Ee Kaaveri
Ooo Jeevanadi Ee Kaaveri
Huttuva Kadeyondu Phala Kodo Kadeyondu
Saagaradali Nadigendu Sangamavu
Tavarina Maneyondu Gandana Maneyondu
Hennige Ide Endu Jeevanavu
Thandeyu Thayiyu Annanu Tangiyu Ella Dooravu
Hosa Mane Hosa Jana Hosa Hosa Bandavu Alle Santhoshavu
Maneya Deepavu Baala Sangeetavu
Mana Mecchida Madadiyu Sikkida Vele Swarga Samsaravu
Kannada Naadina Jeevanadi Ee Kaaveri
Ooo Jeevanadi Ee Kaaveri
Annava Needuva Devanadi Ee Vayyaari
Ooo Devanadi Ee Vayyaari
Ee Thayiyu Nakkare Santhoshada Sakkare
Mamatheya Maathege Bhagyada Dathege
Maaduve Bakthiya Vandane
Similar Songs Lyrics
- Nammamma Nammamma song Lyrics
- Ide Nadu Ide Bhashe Lyrics
- More Kannada Rajyotsava Songs Lyrics
More Jeevanadhi Songs Lyrics
Song Details
- Song: Kannada Nadina Jeevanadi
- Singer: S.P. Balasubhramanyam
- Lyrics: R. N. Jayagopal
- Movie: Jeevanadi
- Video: Here