Shrungarada Hongemara Lyrics in Kannada and English | Panchatantra

Shrungarada Hongemara Lyrics thumbnail

Shrungarada Hongemara Lyrics are penned by Yogaraj Bhat. The song is sung by Vijay Prakash. Shrungarada Hongemara lyrics are from the movie Panchatantra starring Vihan Gowda, Sonal Manterio, Akshara Gowda, Rangayana Raghu, Balarajawadi, Deepak, Kari Subbu. Panchatantra released in 2019 and the movie is directed by Yogaraj Bhat. and produced by Hariprasad Jayanna, Hemanth Paradkar. The music for the movie is composed by V Harikrishna. Shrungarada Hongemara lyrics in Kannada and English is given below.

ಶೃಂಗಾರದ ಹೊಂಗೆಮರ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿಹಾನ್ ಗೌಡ, ಸೋನಲ್, ಅಕ್ಷರ ಗೌಡ, ರಂಗಾಯಣ ರಘು, ಬಲರಾಜವಾದಿ, ದೀಪಕ್, ಕರಿ ಸುಬ್ಬು ಅವರು ನಟಿಸಿದ ಪಂಚತಂತ್ರ ಚಿತ್ರದ ಹಾಡಾಗಿದೆ. ಶೃಂಗಾರದ ಹೊಂಗೆಮರ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಪಂಚತಂತ್ರ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾಡ್ಕರ್.

panchatantra songs lyrics movie poster

  • ಹಾಡು: ಶೃಂಗಾರದ ಹೊಂಗೆಮರ
  • ಚಿತ್ರ: ಪಂಚತಂತ್ರ (೨೦೧೯)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾಡ್ಕರ್
  • ಸಂಗೀತ: ವಿ ಹರಿಕೃಷ್ಣ

 

Shrungarada Hongemara lyrics in Kannada

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ
ಕಳ್ಳಾಟಕೆ ಮಳ್ಳ ಮನ ಚೀ ಅಂದಿದೆ
ಚೆಲ್ಲಾಟಕೆ ಚೆಲುವು ಹೂ ಎಂದಿದೆ

ಇಬ್ಬರ ಕಾಮನೆ ನೂರು
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ಬೆನ್ನಿಗೆ ಬೆರಳು ಸೋಕಿ
ಕಣ್ಣೆರಡು ಕೇಳಿವೆ ಬಾಕಿ
ಇದು ತುಂಟ ಮೌನಾಚರಣೆಯು

ಸ್ಪರ್ಶವೂ ಕೇಳಿದೆ ಕೊಂಚ
ಉಷ್ಣಾಂಶದ ಬೆಚ್ಚನೆ ಲಂಚ
ಶುರು ಜಂಟಿ ಕಾರ್ಯಾಚರಣೆಯು

ಗೊತ್ತಿದ್ದೂ ದಾರಿ ತಪ್ಪಿದಾಗ ಬೆವರಿನ ಹನಿಯೂ
ಹುಚ್ಚೆದ್ದು ಹಾಡು ಹೇಳಬಹುದೇ ಒಳಗಿನ ದನಿಯು

ಇದು ಆವೇಗದ ಆಲಿಂಗನ
ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ನಲ್ಮೆಯಲ್ಲೆಲ್ಲವೂ ಚಂದ
ಮನ್ಮಥನ ಹಾವಳಿಯಿಂದ
ಬಚಾವಾದರೇನು ಸುಖವಿದೆ

ಬಿಚ್ಚಿದ ಕೂದಲ ಘನತೆ
ಅರೆ ಮುಚ್ಚಿದ ಕಂಗಳ ಕವಿತೆ
ಪ್ರಣಯಕೊಂದು ಬೇರೆ ಮುಖವಿದೆ

ಕಡು ಮೋಹದಲ್ಲಿ ಗಡಿಯ ರೇಖೆಗೆಲ್ಲಿದೆ ಬೆಲೆಯು
ತಿಳಿಗೇಡಿಯಾಗದೇನೆ ಸಿಗದು ತೋಳಿಗೆ ನೆಲೆಯು

ರತಿ ರಂಗೇರಲು ಪ್ರತಿ ಕ್ಷಣ
ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ
ಕಳ್ಳಾಟಕೆ ಮಳ್ಳ ಮನ ಚೀ ಅಂದಿದೆ
ಚೆಲ್ಲಾಟಕೆ ಚೆಲುವು ಹೂ ಎಂದಿದೆ

ಇಬ್ಬರ ಕಾಮನೆ ನೂರು
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ

Shrungarada Hongemara lyrics in English

Shrungaarada Honge Mara Hoo Bittide
Naachike Namma Jote Too Bittide
Kallatake Malla Mana Chee Andide
Chellatake Cheluvu Hoo Endide

Ibbara Kaamane Nooru
Tuti Gaayake Kaarana Yaru
Idu Gotiillada Romaanchana
Hogi Bantu Praana

Shrungaarada Honge Mara Hoo Bittide
Naachike Namma Jote Too Bittide

Bennige Beralu Soki
Kanneradu Kelive Baaki
Idu Thunta Mounaacharaneyu

Sparshavu Kelide Koncha
Ushnaamshada Becchane Lancha
Shuru Janti Kaaryaacharaneyu

Gottiddu Daari Tappidaaga Bevarina Haniyu
Huccheddu Haadu Helabahude Olagina Daniyu

Idu Aavegada Aalingana
Hogi Bantu Praana

Shrungaarada Honge Mara Hoo Bittide
Naachike Namma Jote Too Bittide

Nalmeyallellavu Chanda
Manmathana Haavaliyinda
Bachaavaadarenu Sukhavide

Bicchida Koodala Ghanate
Are Mucchida Kangala Kavithe
Pranayakondu Bere Mukhavide

Kadumohadalli Gadiya Rekhegellide Beleyu
Thiligediyaagadene Sigadu Tholige Neleyu

Rathi Rangeralu Prati Kshana
Hogi Banthu Praana

Shrungaarada Honge Mara Hoo Bittide
Naachike Namma Jote Too Bittide
Kallatake Malla Mana Chee Andide
Chellatake Cheluvu Hoo Endide

Ibbara Kaamane Nooru
Tuti Gaayake Kaarana Yaru
Idu Gotiillada Romaanchana
Hogi Bantu Praana

More From Panchatantra Movie Songs Lyrics

  1. Ee Vayasalli Song Lyrics
  2. Beda Hogu Andbutlu Song Lyrics

Listen to the Album on

Song Details