Jigi Jigi Bombeyata Lyrics are penned by Hamsalekha. The song is sung by K. Shivaram. Jigi Jigi Bombeyata lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others. Solillada Saradara released in 1992 and the movie is directed by Om Sai Prakash. and produced by K. Prabhakar. The music for the movie is composed by Hamsalekha. Jigi Jigi Bombeyata lyrics in Kannada is given below.
ಜಿಗಿ ಜಿಗಿ ಬೊಂಬೆಯಾಟ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಶಿವರಾಂ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಜಿಗಿ ಜಿಗಿ ಬೊಂಬೆಯಾಟ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.
- ಹಾಡು: ಜಿಗಿ ಜಿಗಿ ಬೊಂಬೆಯಾಟ
- ಚಿತ್ರ: ಸೋಲಿಲ್ಲದ ಸರದಾರ (೧೯೯೨)
- ನಿರ್ದೇಶಕ: ಓಂ ಸಾಯಿ ಪ್ರಕಾಶ್
- ನಿರ್ಮಾಪಕ: ಕೆ. ಪ್ರಭಾಕರ್
- ಸಂಗೀತ: ಹಂಸಲೇಖ
Jigi Jigi Bombeyata lyrics in Kannada
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜನರೇ ಜನರೇ ಕೇಳಿ ಜನರೇ
ಒಂದು ಕಥೆಯ ಒಂದು ವ್ಯಥೆಯ
ಗಿರಿಜಾಪೂರದ ದೊರೆಯ ಮಗಳ
ಮದುವೆ ಕಥೆಯ ಮದುವೆ ವ್ಯಥೆಯ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ತಕಧಿಮಿತೊಂ ತಡಿಗಿಣತೊಂ
ತಕಧಿಮಿತೊಂ ತಡಿಗಿಣತೊಂ
ಗಿರಿಜಾಪುರದ ಮಹಾರಾಜನು
ಮಕ್ಕಳಿಲ್ಲದೇ ಆಳುತ್ತಿದ್ದನು
ಆ ರಾಜನ ಮುದ್ದಿನ ರಾಣಿಯು
ಸ್ವಂತ ಮಕ್ಕಳಿಲ್ಲದೆ ಅಳುತ್ತಿದ್ದಳು
ಪೂಜೆ ಮಾಡಿ ಬಂದ್ರು ಮಕ್ಕಳಿಲ್ಲ
ಕೋಟಿ ದಾನ ಎತ್ತಿ ಕೊಟ್ರು ಮಕ್ಕಳಿಲ್ಲ
ಯುದ್ಧ ಮಾಡಿ ಬಂದ್ರು ಮಕ್ಕಳಿಲ್ಲ
ದಿನ ನಿದ್ದೆ ಮಾಡಿ ಎದ್ರು ಮಕ್ಕಳಿಲ್ಲ
ಹೀಗಿರತಕ್ಕಂತ ಕಾಲದಲ್ಲಿ
ಈಶ್ವರನು ಕಣ್ಣು ಬಿಟ್ಟಾ…
ಗಂಡು ಮಗು ಬೇಕು ಅಂತ ಬೇಡಿಕೊಂಡ
ರಾಜ ರಾಣಿಗೆ ಒಂದು ಹೆಣ್ಣು ಮಗುವ ಕೊಟ್ಟ
ನಾವು ಕೇಳೋದ ಒಂದು ಕಣೆಯಾ
ಶಿವ ನೀಡೋದು ಒಂದು ಕಾಣೆಯ
ಕೂಗಿ ಮೃಷ್ಟಾನ್ನ ಕೊಡುತ್ತಾನೆ
ನಡುವೆ ಕಲ್ಲುನೂ ಬೆರೆಸುತ್ತಾನೆ
ಗಂಡಾಗಿದ್ದ ರಾಜ್ಯ ಪರರ ಸೊತ್ತು
ಎಂಬ ಚಿಂತೆ ರಾಜನ ನೆತ್ತಿ ಮೇಲೆ ಬಿತ್ತೂ
ತನ್ನ ತಂಗಿಯ ಮಗನ್ನ ಕರೆಸಿಕೊಂಡ
ಅಂಬೆಗಾಲಿನ ಮಗಳ ಗಂಡ ಮಾಡಿಕೊಂಡ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ತಕಧಿಮಿತೊಂ ತಡಿಗಿಣತೊಂ
ತಕಧಿಮಿತೊಂ ತಡಿಗಿಣತೊಂ
ಕುಂಟೆ ಬಿಲ್ಲೆಯಾಡೋ ಮಕ್ಕಳು
ಚೆಂಡು ಕೋಲಾಟ ಆಡೋ ಪುಟ್ಟ ವಯಸ್ಸಿನವು
ನಾಳೇ ಏನಿದೇ ಎಂಬ ಚಿಂತೆಯಿಲ್ಲ
ತಾವು ಗಂಡ ಹೆಂಡತಿ ಎಂಬ ಬುದ್ದಿಯಿಲ್ಲಾ
ತುಂಗಾ ನದಿಯ ದೊಡ್ಡ ತೀರದಲ್ಲಿ
ಒಮ್ಮೆ ದೋಣಿಯು ಏರೋ ತುಂಟ ಆಟದಲಿ
ಗಂಡನ ಪಾತ್ರದ ಚಿಕ್ಕ ಮಗು
ಅಯ್ಯೋ ಕೈ ಜಾರಿ ಹೋಯಿತು ನದಿಯ ಸುಳಿಯಲಿ
ನಂಬಿರತಕ್ಕಂತ ಕಾಲದಲ್ಲಿ
ಈಶ್ವರನು ಕೈಯ ಬಿಟ್ಟ
ನೀರಿನಲ್ಲಿ ಮುಳುಗಿದ ಅಳಿಯ ಸತ್ತಾನೋ
ಇಲ್ಲವೋ ಎಂಬ ಅನುಮಾನ ತಂದಿಟ್ಟ
ಬೆಳೆದಳು ನೋಡಿ ರಾಜಕುಮಾರಿ
ಯೌವ್ವನ ತುಂಬಿದ ಹೆಣ್ಣಾಗಿ
ವೀರರ ಕೈಗೆ ಧೀರನ ಮೈಗೆ
ಒಪ್ಪುವ ಸುಂದರ ಹೆಣ್ಣಾಗಿ
ಪ್ರೇಮದ ಬಲೆಯಲಿ ಬಿದ್ದಳು ಒಮ್ಮೆ
ಊರಿನ ಶೂರನ ಕಣ್ಣೋಟಕೇ
ರಾಜನು ರಾಣಿಯು ಚಿಂತೆಗೆ ಬಿದ್ದರು
ಇಬ್ಬರ ಪ್ರೇಮದ ವಿವಾಹಕೆ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ನೀರಲ್ಲಿ ಬಿದ್ದ ಅಂದಿನ ಗಂಡ
ಧಿಮ್ಮನೇ ಬಂದನು ಮಾಯಾ ಮಯಾ
ನೀರಲ್ಲಿ ಬಿದ್ದ ಅಂದಿನ ಗಂಡ
ಧಿಮ್ಮನೇ ಬಂದನು ಮಾಯಾ ಮಯಾ
ಬಾಲ್ಯದ ಶಾಪ ಪ್ರೇಮಕೆ ಬಡಿದು
ರಾಜಕುಮಾರಿಗೇ ಅಯೋಮಯ
ಬಾಲ್ಯದ ಶಾಪ ಪ್ರೇಮಕೆ ಬಡಿದು
ರಾಜಕುಮಾರಿಗೇ ಅಯೋಮಯ
More Solillada Saradara songs lyrics
- Ee Kannada Mannanu Maribeda Lyrics
- Jogayya Jogayya Kai Nodayya Lyrics
- Premavendarenu Helabaradenu Lyrics
- Kaveramma Kapadamma Song Lyrics
- Yaarigaagi Hele Lyrics
Song Details
- Movie: Solillada Saradara
- Starring: Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others
- Song Name: Jigi Jigi Bombeyata
- Singer: K. Shivaram
- Lyricist: Hamsalekha
- Music: Hamsalekha
- Year: 1992
- Watch the video: here
- Producer: K. Prabhakar
- Director: Om Sai Prakash