O Meghave Meghave Lyrics in Kannada – ಓ ಮೇಘವೇ ಮೇಘವೇ ಸಾಹಿತ್ಯ

0
3360
O meghave meghave lyrics thumbnail

O Meghave Meghave Lyrics are penned by Hamsalekha. The song is sung by S. P. Balasubrahmanyam & K. S. Chithra. O Meghave Meghave lyrics are from the movie Shrungara Kavya starring Raghuveer, Sindhu, Ashok Rao, Srilalitha, Shobhraj, Tennis Krishna, Rajanand, Agro Chikkanna & Manju Malini. Shrungara Kavya released in 1993 and the movie is directed by S. Mahendar. and produced by M. Govindaraju. The music for the movie is composed by Hamsalekha. O Meghave Meghave lyrics in Kannada and English is given below.

ಓ ಮೇಘವೇ ಮೇಘವೇ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಕೆ. ಎಸ್. ಚಿತ್ರ ರವರು. ಈ ಹಾಡು ೧೯೯೩ ಬಿಡುಗಡೆಯಾದ ರಘುವೀರ್, ಸಿಂಧು, ಅಶೋಕ್ ರಾವ್, ಶ್ರೀಲಲಿತಾ, ಶೋಭಾರಾಜ್, ಟೆನಿಸ್ ಕೃಷ್ಣ, ರಾಜಾನಂದ್, ಚಿಕ್ಕಣ್ಣ & ಮಂಜು ಮಾಲಿನಿ ಅವರು ನಟಿಸಿದ ಶೃಂಗಾರ ಕಾವ್ಯ ಚಿತ್ರದ ಹಾಡಾಗಿದೆ. ಓ ಮೇಘವೇ ಮೇಘವೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಶೃಂಗಾರ ಕಾವ್ಯ ಚಿತ್ರ ನಿರ್ದೇಶಿಸಿದವರು ಎಸ್. ಮಹೇಂದರ್ ಮತ್ತು ನಿರ್ಮಾಪಕರು ಎಂ. ಗೋವಿಂದರಾಜು.

  • ಹಾಡು: ಓ ಮೇಘವೇ ಮೇಘವೇ
  • ಚಿತ್ರ: ಶೃಂಗಾರ ಕಾವ್ಯ (೧೯೯೩)
  • ನಿರ್ದೇಶಕ: ಎಸ್. ಮಹೇಂದರ್
  • ನಿರ್ಮಾಪಕ: ಎಂ. ಗೋವಿಂದರಾಜು
  • ಸಂಗೀತ: ಹಂಸಲೇಖ

O Meghave Meghave lyrics in Kannada

ಓಹೋಹೋ ಹೋಹೋ
ಓಹೋಹೋ ಹೋಹೋ
ಅಹಹ ಹಹ
ಅಹಹ ಹಹ

ಓಹೋಹೋ ಹೋಹೋ
ಓಹೋಹೋ ಹೋಹೋ
ಅಹಹ ಹಹ
ಅಹಹ ಹಹ

ಓ ಮೇಘವೇ ಮೇಘವೇ ಹೋಗಿಬಾ
ಈ ಓಲೆಯ ಅವಳಿಗೆ ನೀಡಿಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೇ ಮೇಘವೇ ಹೋಗಿಬಾ
ಈ ಓಲೆಯ ಅವನಿಗೆ ನೀಡಿಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೇ ಮೇಘವೇ ಹೋಗಿಬಾ
ಈ ಓಲೆಯ ಅವಳಿಗೆ ನೀಡಿಬಾ

ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳತಿ ಓದುವೆಯ?

ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳೆಯ ಓದುವೆಯ?

ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ?

ಇದು ಓದೋ ಓಲೆಯಲ್ಲ ಬರೆದುಕೋ
ನನ್ನ ಜೀವ ನಿನಗೆ ಎಂದುಕೋ…
ನಿನ್ನ ಮನದ ಮನೆಗೆ ತಂದುಕೋ

ಈ ಕಂಗಳ ಮುಂಬಾಗಿಲ
ಬಾ ತೆರೆಯುವೆ ಬಂದು ನೀ ಸೇರಿಕೊ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪಾತ್ರಕೆ ವಂದನೆ

ಮುಗಿಲೇ ಬೆಳ್ಳ್ಮುಗಿಲೆ ತಂಪೆಲರೆ ತಳಿರೆ
ಹಗಲೆ ಹಗಲಿರುಳೆ ನಿನ್ನೆದುರು ನಾವೊಬ್ಬರೆ

ವನವೆ ಕಾನನವೆ ಹೂ ಬನವೆ ಹಸಿರೇ
ಗಿರಿಯೇ ನೀರ್ಝರಿಯೆ ನಮ್ಮೊಳಗೆ ನಿಮ್ಮುಸಿರೆ

ಈ ಒಲವಿನ ಕಣ್ಣಲಿ ಸರ್ವವೂ ಸುಂದರ

ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ
ಒಂದೇ ಜೀವ ಜೋಡಿ ಒಡಲಲಿ

ಈ ಕಂಗಳ ಮುಂಬಾಗಿಲ
ನಾ ತೆರೆಯುವೆ ಬಂದು ನೀ ಸೇರಿಕೊ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪಾತ್ರಕೆ ವಂದನೆ

ಈ ಕಂಗಳ ಮುಂಬಾಗಿಲ
ನಾ ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪತ್ರಕೆ ವಂದನೆ

O Meghave Meghave lyrics in English

Ohoho Hoho
Ohoho Hoho
Ahaha Haha
Ahaha Haha

Ohoho Hoho
Ohoho Hoho
Ahaha Haha
Ahaha Haha

Oh Meghave.. Meghave.. Hogi Baa
Ee Oleya.. Avalige.. Needi Baa
Naa Hogaluu… Maathaadalu..
Ee Naachikee, Anjikee Mundhidhe

Oh Meghave.. Meghave.. Hogi Baa
Ee Oleya.. Avalige.. Needi Baa
Naa Hogaluu… Maathaadalu..
Ee Naachikee, Anjikee Mundhidhe

Oh Meghave.. Meghave.. Hogi Baa
Ee Oleya.. Avalige.. Needi Baa

Mugila Baanagala Oleyali Hrudhaya
Iduve Neediruve Oh Gelathi Odhuveyaa

Mugila Baanagala Oleyali Hrudhaya
Iduve Neediruve Oh Geleya Odhuveya?

Ee Bellane, Oleyaa, Hege Na Odhalii

Idhu Odho Oleyalla Baredhukoo
Nanna Jeeva Ninnadhe Yendhukoo…
Oo Ninna Manadha Manege Thandhukoo

Ee Kangalaa.. Mumbaagilaa..
Baa Thereyuve Bandhu Nee Seriko

Oh Meghave.. Meghave.. Hogi Baa
Ee Oleya.. Avalige.. Needi Baa

Mugile Belmugile Thapilare Thaliree
Hagale, Hagalirulee Ninnedaru Naavobbare

Vanave Khaananave Huu Banave Hasiree
Ghiriye, Neer Jhariye Nammolage Nimmusire

Ee Olavina Kannali Sarvavu Sundhara

Illi Bhaanu Bhoomigilla Anthara
Naanu Neenu Illa Nammali
Ondhe Jeeva Jodi Odalali

E Kangalaa, Mumbaagilaa
Na Thereyuve Bandhu Nee Serikoo

Oh Meghave.. Meghave.. Hogi Baa
Ee Oleya.. Avalige.. Needi Baa

E Kangalaa, Mumbaagilaa
Na Thereyuve Bandhu Nee Serikoo

Oh Meghave.. Meghave.. Hogi Baa
Ee Oleya.. Avalige.. Needi Baa

More Shrungara Kavya songs lyrics

  1. Kannada Gangeyali Lyrics
  2. O Meghave Meghave Lyrics in Kannada
  3. Shrungara Kavya Title Song Lyrics
  4. Ambara Chumbitha Prema Lyrics in Kannada & English
  5. Jeevanavellavu Naa Haaduve Lyrics in Kannada & English
  6. Yaaru Nodaru Yaaru Kelaru Lyrics in Kannada

Song Details